🎵

Akashada Gaali

Album: Akashada Gaali (Kyaabre Original Soundtrack) Durasi: 3:59

ಆಕಾಶದ ಗಾಳಿ ಬಿರುಗಾಳಿ

ನನ್ನದೇ ನಿನ್ನೆಡೆ

ಆ ಬಾಣದ ದಾರಿ ಮರುದಾರಿ

ನಿನ್ನದೇ ನನ್ನೆಡೆ

ಬಿರುಗಾಳಿ ಬೀಸೊಂದು ಗಾಳಿ, ಈ ಬಾರಿ ನನ್ನೆಡೆ

ನಡುದಾರಿ ನಾ ನಿಂತ ದಾರಿ ಪ್ರತೀಬಾರಿ ನಿನ್ನೆಡೆ

ಆಕಾಶದ ಗಾಳಿ ಬಿರುಗಾಳಿ, ನನ್ನದೇ ನಿನ್ನೆಡೆ

ಆ ಬಾಣದ ದಾರಿ ಮರುದಾರಿ, ನಿನ್ನದೇ ನನ್ನೆಡೆ ನನ್ನೆಡೆ

ಸಣ್ಣದೊಂದು ಕಲ್ಪನೆ ಸಾವಿರಾರು ಯಾತನೆ

ಏನೋ ಹೊತ್ತುಕೊಂಡು ಕಾಣೆಯಾಯ್ತು ಯಾಕೋ ಬೇಗನೆ

ಸೋಲು ಸುಂಕ ಕಟ್ಟುತ್ತಾ ಗೆಲ್ಲೊ ಬಿಂಕ ನಿಶ್ಚಿತ

ಕಡಿವಾಣ ಬಾನದಾರಿಗಿದು ಎಂಥಾ ಅದ್ಭುತ

ಗರಿಗೇಕೆ ಇಲ್ಲಿ ಗಾಳಿಯಾ ಭಯ ಅಂಜದೆ ಸಾಗಿಹೆ

ಬಿರುಗಾಳಿ ಗರಿ ಕಂಡು ವಿಸ್ಮಯ ಸ್ವಂತಿಕೆ ತಂದಿದೆ

ಬಿರುಗಾಳಿ ಬೀಸೊಂದು ಗಾಳಿ, ಈ ಬಾರಿ ನನ್ನೆಡೆ

ನಡುದಾರಿ ನಾ ನಿಂತ ದಾರಿ ಪ್ರತೀಬಾರಿ ನಿನ್ನೆಡೆ

ಆಕಾಶದ ಗಾಳಿ ಬಿರುಗಾಳಿ, ನಿನ್ನದೇ

ಆಕಾಶದ ಗಾಳಿ ಬಿರುಗಾಳಿ, ನಿನ್ನದೇ

ಆಕಾಶದ ಗಾಳಿ ಬಿರುಗಾಳಿ, ನಿನ್ನದೇ

ಆಕಾಶದ ಗಾಳಿ ಬಿರುಗಾಳಿ, ನಿನ್ನದೇ